Targeted Advertising, ಗುರಿಯಿಟ್ಟ ಜಾಹೀರಾತು, guriyiṭṭa jāhīrātu
Advertisements have changed over time. When they appeared in papers, they would be read by those who bought the paper. When they appeared it between television show, they would be watched by people watching TV. If the show was a late night one, then ads aimed at adults would be aired. On kids shows, products that children might be tempted to ask for.
But something changed with the internet. The ads are no longer generic, but aimed specifically at you (aka targeted advertising). For example, when you visit a news website, which ads will appear there is decided on the basis of other information about you collected from different sources. It could be what you were browsing on myntra, your train bookings, your location and so on.
Sometimes, it is not just commercial products that can be targeted like this, but also political ads.
That means, information about us (what we watch, what we buy, where we live etc) is collected by the sites we visit, and then used to see which ads to send to us.
—
ಸಮಯದ ಜೋತೆ ಜಾಹೀರಾತುಗಳು ಕೂಡ ಬದಲಾಗಿವೆ. ಅವು ಸುದ್ದಿಪತ್ರಿಕೆಯಲ್ಲಿ ಕಾಣಿಸಿಕೊಂಡಾಗ, ಪತ್ರಿಕೆಯನ್ನು ಖರೀದಿಸಿದವರು ಅವನ್ನು ಓದುತಿದ್ದರು. ಅವು ದೂರದರ್ಶನದಲ್ಲಿ ಕಾರ್ಯಕ್ರಮಗಳ ನಡುವೆ ಕಾಣಿಸಿಕೊಂಡಾಗ, ದೂರದರ್ಶನ ವೀಕ್ಷಿಸುತ್ತಿದ್ದ ಜನರು ಅದನ್ನು ವೀಕ್ಷಿಸುತ್ತಿದ್ದದರು. ಒಂದು ವೇಳೆ ಕಾರ್ಯಕ್ರಮವು ತಡರಾತ್ರಿಯಲ್ಲಿ ಪ್ರಸಾರವಾದರೆ, ವಯಸ್ಕರನ್ನು ಗುರಿಯಾಗಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತಿತ್ತು. ಅದೆ ರೀತಿ ಮಕ್ಕಳ ಕಾರ್ಯಕ್ರಮಗಳಲ್ಲಿ, ಮಕ್ಕಳು ಕೇಳಲು ಪ್ರಚೋದಿಸಬಹುದಾದ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತಿತ್ತು.
ಆದರೆ ಅಂರ್ತಜಾಲದೊಂದಿಗೆ ಕೆಲವು ಬದಲಾವಣೆಗಳಾಗಿವೆ. ಜಾಹೀರಾತುಗಳು ಇನ್ನು ಮುಂದೆ ಎಲ್ಲಾ ವೀಕ್ಷಕರಿಗು ಒಂದೆಯಾಗಿರುವುದಿಲ್ಲ, ಅವನ್ನು ನಿರ್ದಿಷ್ಟವಾಗಿ ನೀಮ್ಮನ್ನೆ ಗುರಿಯಾಗಿಸಿ ತೋರಿಸಲಾಗುತ್ತದೆ (ಉರುಫ್ ಗುರಿಯಿಟ್ಟ ಜಾಹೀರಾತು). ಉದಾಹರಣೆಗೆ, ನೀವು ಸುದ್ದಿಪತ್ರಿಕೆಯ ವೆಬ್ಸೈಟ್ಗೆ ಭೇಟಿ ನೀಡಿದಾಗ, ನಿಮಗೆ ಯಾವ ಜಾಹೀರಾತುಗಳನ್ನು ತೋರಿಸಬೇಕೆಂಬುದನ್ನು, ಬೇರೆ ಮೂಲಗಳಿಂದ ಸಂಗ್ರಹಿಸಲಾದ ನಿಮ್ಮ ಮಾಹಿತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅದರಲ್ಲಿ ನಿಮ್ಮ ಮಿಂತ್ರಾ ಕೊಳ್ಳುವಿಕೆ, ನಿಮ್ಮ ರೈಲು ಬುಕಿಂಗ್, ನಿಮ್ಮ ಸ್ಥಳ ವಿವರ ಮತ್ತು ಇನ್ನಿತರ ವಿಷಯಗಳು ಸೇರಿರಬಹುದು.
ಕೆಲವೊಮ್ಮೆ, ವಾಣಿಜ್ಯ ಉತ್ಪನ್ನಗಳ ಜಾಹೀರಾತಿಗೆ ಮಾತ್ರವಲ್ಲದೆ ರಾಜಕೀಯ ಜಾಹೀರಾತುಗಳನ್ನು ಕೂಡ ಇದೆ ರೀತಿ ನಿಮ್ಮನ್ನೇ ಗುರಿಯಾಗಿಸಿ ತೋರಿಸಲಾಗುತ್ತದೆ.
ಇದರರ್ಥ, ನಾವು ಭೇಟಿ ನೀಡುವ ಸೈಟ್ಗಳು ನಮ್ಮ ಮಾಹಿತಿಯನ್ನು (ನಾವು ಏನು ವೀಕ್ಷಿಸುತ್ತೇವೆ, ಏನು ಖರೀದಿಸುತ್ತೇವೆ, ನಾವು ಎಲ್ಲಿ ವಾಸಿಸುತ್ತೇವೆ.. ಇನ್ನೂ ಮುಂತಾದವು) ಸಂಗ್ರಹಿಸುತ್ತವೆ ಹಾಗು ನಂತರ ನಮಗೆ ಯಾವ ಜಾಹೀರಾತುಗಳನ್ನು ಕಳುಹಿಸಬೇಕೆಂದು ನಿರ್ಧರಿಸಲು ಉಪಯೋಗಿಸುತ್ತಾರೆ.
—
samayada jōte jāhīrātugaḷu kūḍa badalāgive. avu suddipatrikeyalli kāṇisikoṇḍāga, patrikeyannu kharīdisidavaru avannu ōdutiddaru. avu dūradarśanadalli kāryakramagaḷa naḍuve kāṇisikoṇḍāga, dūradarśana vīkṣisuttidda janaru adannu vīkṣisuttiddadaru. ondu vēḷe kāryakramavu taḍarātriyalli prasāravādare, vayaskarannu guriyāgisida jāhīrātugaḷannu prasāra māḍalāgutittu. ade rīti makkaḷa kāryakramagaḷalli, makkaḷu kēḷalu pracōdisabahudāda utpannagaḷa jāhīrātugaḷannu prasāra māḍalāgutittu.
ādare anrtajāladondige kelavu badalāvaṇegaḷāgive. jāhīrātugaḷu innu munde ellā vīkṣakarigu ondeyāgiruvudilla, avannu nirdiṣṭavāgi nīm’manne guriyāgisi tōrisalāguttade (uruph guriyiṭṭa jāhīrātu). udāharaṇege, nīvu suddipatrikeya vebsaiṭge bhēṭi nīḍidāga, nimage yāva jāhīrātugaḷannu tōrisabēkembudannu, bēre mūlagaḷinda saṅgrahisalāda nim’ma māhitiya ādhārada mēle nirdharisalāguttade. adaralli nim’ma mintrā koḷḷuvike, nim’ma railu bukiṅg, nim’ma sthaḷa vivara mattu innitara viṣayagaḷu sērirabahudu.
kelavom’me, vāṇijya utpannagaḷa jāhirātige mātravallade rājakīya jāhīrātugaḷannu kūḍa ide rīti nim’mannē guriyāgisi tōrisalāguttade.
idarartha, nāvu bhēṭi nīḍuva saiṭgaḷu nam’ma māhitiyannu (nāvu ēnu vīkṣisuttēve, ēnu kharīdisuttēve, nāvu elli vāsisuttēve.. innū muntādavu) saṅgrahisuttave hāgu nantara namage yāva jāhīrātugaḷannu kaḷuhisabēkendu nirdharisalu upayōgisuttāre.
Like this:
Like Loading...